Saturday Mirror-3: Special Lecture by Dr. Francis Jayakanth

ಈ ಟಿಪ್ಪಣಿಯ ಕನ್ನಡ ಆವೃತ್ತಿಯು ಇಂಗ್ಲಿಶ್ ಆವೃತ್ತಿಯ ನಂತರ ಲಭ್ಯವಿದೆ.

“The use of intellectual output by most countries of the world including India is miniscule.” said Dr. Francis Jayakanth, Librarian, Indian Institute of Management Bangalore (IIM-B). He delivered a lecture on Saturday, 19th March 2016 on “Institutional Repository as a Digital Library Service” as part of “Saturday Mirror” Special Lecture Series organized by the Department of Studies & Research in Library and Information Science, Tumkur University.

000Dr. Rajendra Babu introducing the resource person

222Dr. B T Sampath Kumar welcomes Dr. Francis

A common perception about digital library is that it is just a collection of digital documents. However, even a huge collection of digital documents does not become a digital library unless it is supported by the methods of search, access and retrieval. A digital library will have a focused purpose and therefore, documents are carefully selected, deposited, described, indexes are built and methods of search, access and retrieval and well-defined. It is to be noted that digital library and online library catalogue are not the same. Their purposes are different.

111Dr. Francis begins the lecture

The scope of digital libraries is not just confined to education and research. Health information, culture and heritage related knowledge have been successfully preserved in digital libraries. Library of Congress “Ancient Manuscripts from the Desert Libraries of Timbuktu”, Kalasampada digital library of Indian cultural heritage are noteworthy examples in this regard.

666Interaction in progress

Digital libraries have limitations too. Technological obsolescence, hardware cost and digital rights management pose serious challenges to digital libraries. “The onus of tackling these challenges and making intellectual wealth available to the masses lies on libraries.” he opined.

777

 Getting together…

Students, research scholars, teachers of the Department, university library staff were present on the occasion.

Department of Library and Information Science has been holding “Saturday Mirror” special lecture series on one of the Saturdays every month. This is the third in the series. The first and second lectures had been delivered by Mr. Ananda Byrappa and Dr. Harinarayana N S respectively.

————————————————————————————————————
ಕನ್ನಡ ಆವೃತ್ತಿ
————————————————————————————————————

“ಭಾರತವನ್ನೂ ಒಳಗೊಂಡಂತೆ ವಿಶ್ವದ ಬಹುತೇಕ ರಾಷ್ಟ್ರಗಳ ಬೌದ್ಧಿಕ ಸಂಪತ್ತಿನ ಬಳಕೆಯ ಪ್ರಮಾಣ ಸಾಗರದಲ್ಲಿ ಕೆಲವು ಹನಿಗಳನ್ನು ಮಾತ್ರ ತೆಗೆದುಕೊಂಡಂತಿದೆ.  ಬೌದ್ಧಿಕ ಸಂಪತ್ತನ್ನು ಕ್ರೋಢೀಕರಿಸಿ, ಪರಿಷ್ಕರಿಸಿ, ಜನರಿಗೆ ತಲುಪಿಸುವಲ್ಲಿ ಡಿಜಿಟಲ್ ಗ್ರಂಥಾಲಯಗಳ ಪಾತ್ರ ಮಹತ್ತರವಾದದ್ದು.” ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಗ್ರಂಥಪಾಲಕ ಡಾ. ಫ್ರಾನ್ಸಿಸ್ ಜಯಕಾಂತ್ ಅಭಿಪ್ರಾಯಪಟ್ಟರು.  ತುಮಕೂರು ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಆಯೋಜಿಸಿದ್ದ “ಸ್ಯಾಟರ್ಡೇ ಮಿರರ್” ಉಪನ್ಯಾಸ ಸರಣಿಯಲ್ಲಿ ಶನಿವಾರ, ೧೯ ಮಾರ್ಚ್ ೨೦೧೬ರಂದು ಮೂರನೆಯ ಉಪನ್ಯಾಸ ನೀಡಿದ ಫ್ರಾನ್ಸಿಸ್ “ಸಾಂಸ್ಥಿಕ ಗ್ರಂಥಭಂಡಾರಗಳ ರೂಪದಲ್ಲಿ ಡಿಜಿಟಲ್ ಗ್ರಂಥಾಲಯ ಸೇವೆಗಳು” ಎಂಬ ವಿಷಯದ ಕುರಿತು ಸಂವಾದ ನಡೆಸಿದರು.

 
ಡಿಜಿಟಲ್ ಗ್ರಂಥಾಲಯಗಳೆಂದರೆ ಕೇವಲ ಡಿಜಿಟಲ್ ದಾಖಲೆಗಳ ಸಂಗ್ರಹ ಎಂಬ ಸೀಮಿತ ಪರಿಕಲ್ಪನೆ ಇದೆ.  ಆದರೆ, ಎಲ್ಲ ಡಿಜಿಟಲ್ ದಾಖಲೆಗಳನ್ನು ಕೇವಲ ಸಂಗ್ರಹಿಸಿ, ಒಂದೆಡೆ ಇಟ್ಟಲ್ಲಿ ಅದು ಡಿಜಿಟಲ್ ಗ್ರಂಥಾಲಯ ಆಗಲಾರದು.  ಒಂದು ಪ್ರಮುಖ ಉದ್ದೇಶಕ್ಕಾಗಿ ಬಹು ಜಾಗ್ರತೆಯಿಂದ ಆಯ್ಕೆ ಮಾಡಿದ ದಾಖಲೆಗಳನ್ನು ಕ್ರೋಢೀಕರಿಸಿ, ಸೂಕ್ತ ತಂತ್ರಾಂಶ ಬಳಸಿ ಪರಿಷ್ಕರಿಸಿ, ಸೂಚಿಗಳನ್ನು ಅಭಿವೃದ್ಧಿಪಡಿಸಿ, ಶೋಧನೆಗೆ ಅನುವು ಮಾಡಿಕೊಟ್ಟಲ್ಲಿ ಮಾತ್ರ ಅದು ನಿಜವಾದ ಡಿಜಿಟಲ್ ಗ್ರಂಥಾಲಯ ಎನಿಸಿಕೊಳ್ಳುತ್ತದೆ.  ಡಿಜಿಟಲ್ ಗ್ರಂಥಾಲಯಗಳು ಹಾಗೂ ಆನ್ಲೈನ್ ಗ್ರಂಥಸೂಚಿಗಳ ನಡುವೆ ವ್ಯತ್ಯಾಸಗಳಿದ್ದು, ಎರಡರ ಉದ್ದೇಶ ಭಿನ್ನವಾದುದು ಎಂದು ತಿಳಿಸಿದರು.

 
ಡಿಜಿಟಲ್ ಗ್ರಂಥಾಲಯಗಳ ಬಳಕೆಯ ವ್ಯಾಪ್ತಿ ಕೇವಲ ಶಿಕ್ಷಣ ಮತ್ತು ಸಂಶೋಧನಾ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಆರೋಗ್ಯ ಮಾಹಿತಿ, ಸಂಸ್ಕೃತಿ, ಪರಂಪರೆಗೆ ಸಂಬಂಧಿಸಿದ ಅಪರೂಪದ ಜ್ಞಾನವನ್ನು ಸಂರಕ್ಷಿಸುವಲ್ಲಿಯೂ ಇವು ಪ್ರಮುಖ ಮಾತ್ರ ವಹಿಸಿವೆ.  ಆಫ್ರಿಕಾದ ಟಿಂಬಕ್ಟು ಪ್ರದೇಶದ ಪ್ರಾಚೀನ ಹಸ್ತಪ್ರತಿಗಳನ್ನು ಸಂರಕ್ಷಿಸಿರುವ ಡಿಜಿಟಲ್ ಗ್ರಂಥಾಲಯ, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಮಾಹಿತಿಯನ್ನೊಳಗೊಂಡ ಕಲಾಸಂಪದ ಡಿಜಿಟಲ್ ಗ್ರಂಥಾಲಯ ಈ ನಿಟ್ಟಿನಲ್ಲಿ ಉತ್ತಮ ಉದಾಹರಣೆಗಳಾಗಿವೆ ಎಂದರು.

 
ಡಿಜಿಟಲ್ ಗ್ರಂಥಾಲಯಗಳಿಗೂ ಕೆಲವು ಮಿತಿಗಳಿವೆ.  ತಂತ್ರಜ್ಞಾನವು ಬೆಳೆಯುತ್ತಿರುವ ವೇಗ, ಯಂತ್ರಾಂಶ ವೆಚ್ಚ, ಡಿಜಿಟಲ್ ಹಕ್ಕು ನಿರ್ವಹಣೆ ಮುಂತಾದ ಸವಾಲುಗಳು ನಮ್ಮ ಮುಂದಿವೆ.  ಅವುಗಳನ್ನು ಸಮರ್ಥವಾಗಿ ನಿರ್ವಹಿಸಿ, ಡಿಜಿಟಲ್ ರೂಪದಲ್ಲಿ ದೇಶದ, ವಿಶ್ವದ ಬೌದ್ಧಿಕ ಸಂಪತ್ತನ್ನು ಒದಗಿಸುವ ಹೊಣೆ ಗ್ರಂಥಾಲಯಗಳ ಮೇಲಿದೆ ಎಂದು ಸಂದೇಶ ನೀಡಿದರು.

 
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಬೋಧಕರು, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ವಿವಿ ಗ್ರಂಥಾಲಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.  ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು “ಸ್ಯಾಟರ್ಡೇ ಮಿರರ್” ಎಂಬ ಶೀರ್ಷಿಕೆಯಡಿ ಪ್ರತಿ ತಿಂಗಳ ಒಂದು ಶನಿವಾರದಂದು ವಿಶೇಷ ಉಪನ್ಯಾಸವನ್ನು ನಡೆಸುತ್ತಿದ್ದು, ಇದು ಈ ಸರಣಿಯಲ್ಲಿ ಮೂರನೆಯ ವಿಶೇಷ ಉಪನ್ಯಾಸವಾಗಿದೆ. ಮೊದಲನೆಯ ಉಪನ್ಯಾಸವನ್ನು ಶ್ರೀ ಆನಂದ ಭೈರಪ್ಪ ಹಾಗೂ ಎರಡನೆಯ ಉಪನ್ಯಾಸವನ್ನು ಡಾ. ಹರಿನಾರಾಯಣ. ಎನ್. ಎಸ್. ಅವರು ನೀಡಿದ್ದರು.

About Rupesh

A Knowledge Vagabond... ಅರಿವಿನ ತಿರುಕ...

Posted on March 20, 2016, in digital libraries, institutional repositories, lectures, library, OpenAccess, SaturdayMirror and tagged , , , , , , . Bookmark the permalink. 2 Comments.

  1. Dr. H Rajendra Babu

    It is a great initiative Rupesh. You are doing a great job by summarizing the talk and posting for the benefit of others, who couldn’t attend the talk.
    I enjoyed reading your posts..

    Keep posting..

    Good luck..

    Like

Leave a comment