Blog Archives

Workshop on Reference Management Tools and e-resources

“Electronic information resources are inevitable for higher learning and research. The availability of e-resources has enhanced the pace and quality of research. Just as the health of an individual depends on the health of the heart, the quality of an educational institution depends on the quality of collection and services offered by its library” said Prof. M Venkateswarlu, Registrar of Tumkur University.

111

He inaugurated the Workshop on Reference Management Tools and E-Resources for Faculty & Research Scholars organized by Tumkur University Library. “The initiatives such as this workshop organized by the University library will go a long way in enhancing the quality of learning and research in the University.” he said.

112
Dr. V Gopakumar, Librarian, Goa University conducted workshop on the theme “Reference Management Tools”. One of the popular reference management tools “Mendeley” and the reference and citation management features in Microsoft Word were demonstrated.

Prof. Ravishankar, Professor, Educational Consultant, Informatics India Ltd. demonstrated the use of e-resource gateway J-Gate and explained the search strategies which can be used to make J-Gate search more effective and relevant. Teachers, research scholars and students of Tumkur University participated in the Workshop. Workshop convener and Deputy Librarian of Tumkur University Library Dr. Ravivenkat proposed thanks.

 

ಉತ್ತಮ ಸಂಶೋಧನೆಗೆ ವಿದ್ಯುನ್ಮಾನ ಸಂಪನ್ಮೂಲ ನಿರ್ವಹಣೆಯ ಜ್ಞಾನ ಅನಿವಾರ್ಯ: ಪ್ರೊ. ವೆಂಕಟೇಶ್ವರಲು

————————————————————————————————-

 

“ಇಂದಿನ ಮಾಹಿತಿ ಯುಗದಲ್ಲಿ ಸಂಪನ್ಮೂಲಗಳು ವಿದ್ಯುನ್ಮಾನ ರೂಪದಲ್ಲಿ ಲಭ್ಯವಿರುವುದರಿಂದ ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಿದೆ. ಗ್ರಂಥಾಲಯಗಳು ಯಾವುದೇ ಶಿಕ್ಷಣ ಸಂಸ್ಥೆಯ ಹೃದಯವಿದ್ದಂತೆ. ಹೇಗೆ ಮನುಷ್ಯನ ಆರೋಗ್ಯವು ಹೃದಯದ ಆರೋಗ್ಯದ ಮೇಲೆ ಅವಲಂಬಿತವಾಗಿದೆಯೋ, ಹಾಗೆಯೇ ಒಂದು ಶಿಕ್ಷಣ ಸಂಸ್ಥೆಯ ಗುಣಮಟ್ಟವು ಗ್ರಂಥಾಲಯಗಳ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ.” ಎಂದು ತುಮಕೂರು ವಿವಿ ಕುಲಸಚಿವ ಪ್ರೊ. ಎಂ. ವೆಂಕಟೇಶ್ವರಲು ಅಭಿಪ್ರಾಯಪಟ್ಟರು.

 

ತುಮಕೂರು ವಿವಿ ಗ್ರಂಥಾಲಯವು ಆಯೋಜಿಸಿದ್ದ ಪರಾಮರ್ಶನ ನಿರ್ವಹಣಾ ಸಾಧನಗಳು ಹಾಗೂ ವಿದ್ಯುನ್ಮಾನ ಮಾಹಿತಿ ಸಂಪನ್ಮೂಲಗಳು ಎಂಬ ವಿಷಯದ ಕುರಿತಾದ ಕಾರ್ಯಾಗಾರವನ್ನು ಅವರು ಉದ್ಘಾಟಿಸಿದರು. ಬೋಧಕರ, ವಿದ್ಯಾರ್ಥಿಗಳ ಹಾಗೂ ಸಂಶೋಧನಾರ್ಥಿಗಳಲ್ಲಿ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಗ್ರಂಥಾಲಯಗಳ ಪಾತ್ರ ಅತ್ಯಂತ ಮಹತ್ತ್ವದ್ದು. ಈ ನಿಟ್ಟಿನಲ್ಲಿ ತುಮಕೂರು ವಿವಿ ಗ್ರಂಥಾಲಯವು ಆಯೋಜಿಸಿರುವ ಕಾರ್ಯಾಗಾರವು ಅತ್ಯುಪಯುಕ್ತ ಕಾರ್ಯಕ್ರಮವಾಗಿದೆ ಎಂದರು.

 

ಗೋವಾ ವಿಶ್ವವಿದ್ಯಾನಿಲಯದ ಗ್ರಂಥಪಾಲಕ ಡಾ. ವಿ. ಗೋಪಕುಮಾರ್ ಪರಾಮರ್ಶನ ನಿರ್ವಹಣಾ ಸಾಧನಗಳನ್ನು ಕುರಿತು ಕಾರ್ಯಾಗಾರವನ್ನು ನಡೆಸಿದರು. ಕಾರ್ಯಾಗಾರದಲ್ಲಿ ‘ಮೆಂಡೆಲೆ’ ಪರಾಮರ್ಶನ ನಿರ್ವಹಣಾ ತಂತ್ರಾಂಶದಲ್ಲಿರುವ ಪ್ರಮುಖ ಸೌಲಭ್ಯಗಳು ಹಾಗೂ ಮೈಕ್ರೊಸಾಫ್ಟ್ ವರ್ಡ್ ತಂತ್ರಾಂಶದಲ್ಲಿರುವ ಪರಾಮರ್ಶನ ಸೌಲಭ್ಯಗಳ ಕುರಿತು ವಿಸ್ತೃತವಾಗಿ ಪ್ರಾತ್ಯಕ್ಷಿಕೆಯನ್ನು ಅವರು ನೀಡಿದರು.

 

ಇನ್ಫಾರ್ಮ್ಯಾಟಿಕ್ಸ್ ಇಂಡಿಯಾ ಸಂಸ್ಥೆಯ ಶೈಕ್ಷಣಿಕ ಸಮಾಲೋಚಕ ಪ್ರೊ. ರವಿಶಂಕರ್ ವಿದ್ಯುನ್ಮಾನ ಮಾಹಿತಿ ಸಂಪನ್ಮೂಲಗಳ ಬಗ್ಗೆ ವಿವರಿಸಿ, ಜೆ-ಗೇಟ್ ನಿಯತಕಾಲಿಕೆಗಳ ಸಂಗ್ರಹಗಾರವನ್ನು ಶೋಧಿಸುವ ತಂತ್ರಗಳು ಹಾಗೂ ಮಾಹಿತಿ ಪಡೆಯುವ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆಯನ್ನು ನೀಡಿದರು.

ತುಮಕೂರು ವಿವಿಯ ಬೋಧಕರು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕಾರ್ಯಾಗಾರದ ಸಂಚಾಲಕರಾದ ತುಮಕೂರು ವಿವಿ ಗ್ರಂಥಾಲಯದ ಉಪಗ್ರಂಥಪಾಲಕ ಡಾ. ಬಿ. ರವಿವೆಂಕಟ್ ಧನ್ಯವಾದ ಸಮರ್ಪಿಸಿದರು.

Advertisements
%d bloggers like this: