Blog Archives

National Conference on Innovative Practices in Libraries: A Report

“Technology is a boon, not a bane for libraries”

ipl_blogDirector of Public Libraries Department Dr. Satishkumar S. Hosamani inaugurated the National Conference on Innovative Practices in Libraries organized by Tumkur University Library

“Libraries are at the threshold of change.  With the influence of technology, traditional libraries are transforming into digital libraries.  Libraries and library professionals remain relevant only if they embrace technology and adopt it in their services.” said Dr. Satishkumar Hosamani, Director, Department of Public Libraries.  He inaugurated the National Conference on Innovative Practices in Libraries organized by Tumkur University Library with sponsorship from Raja Rammohan Roy Library Foundation, Ministry of Culture, Govt. of India.

Professor of Library and Information Science from Kuvempu University Dr. B S Biradar delivered the Keynote address and said “Due to the impact of technology, libraries are no more just storehouses of books.  There are ample opportunities for librarians to adopt innovative practices and deliver services.  Librarians should inculcate technological skills and initiate innovative services in libraries.  Library professionals should have a positive mindset towards technology.”

Vice Chancellor Prof. A H Rajasab remarked “This is the era of accessing information on mobile devices.  Librarians should not be stationary. They should be mobile.  They should take libraries to readers.  A true librarian is one who reads the pulse of readers and provides information accordingly.”

Registrar Evaluation Prof. D V Paramashivamurthy and President of Karnataka State College Librarians Association Mr. M N N Prasad released the Conference Proceedings.

More than 200 library professionals from across the country participated in the conference.  More than 30 papers were presented.  Conference Director Dr. B Ravivenkat and Organizing Secretary Kumara B expressed gratitude.

 

“ತಂತ್ರಜ್ಞಾನ ಗ್ರಂಥಾಲಯಗಳಿಗೆ ಮಾರಕವಲ್ಲ ಪೂರಕ”

ತುಮಕೂರು ವಿವಿ ಗ್ರಂಥಾಲಯವು ಏರ್ಪಡಿಸಿದ್ದ “ಗ್ರಂಥಾಲಯಗಳಲ್ಲಿ ನಾವೀನ್ಯಪೂರ್ಣ ಪದ್ಧತಿಗಳು” ಎಂಬ ವಿಷಯದ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ ಉದ್ಘಾಟಿಸಿದರು

“ಗ್ರಂಥಾಲಯಗಳು ಇಂದು ಬದಲಾವಣೆಯ ಹೊಸ್ತಿಲಲ್ಲಿವೆ.  ತಂತ್ರಜ್ಞಾನದ ಪ್ರಭಾವದಿಂದ ಸಾಂಪ್ರದಾಯಿಕ ಗ್ರಂಥಾಲಯಗಳು ಇಂದು ಡಿಜಿಟಲ್ ಗ್ರಂಥಾಲಯಗಳಾಗಿ ಪರಿವರ್ತನೆಗೊಳ್ಳುತ್ತಿವೆ.  ತಂತ್ರಜ್ಞಾನವನ್ನು ಒಪ್ಪಿಕೊಂಡು, ಗ್ರಂಥಾಲಯ ಸೇವೆಗಳಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಗ್ರಂಥಾಲಯಗಳು ಹಾಗೂ ಗ್ರಂಥಾಲಯ ವೃತ್ತಿಪರರು ಇಂದಿನ ಜಗತ್ತಿನಲ್ಲಿ ಪ್ರಸ್ತುತರಾಗಲು ಸಾಧ್ಯ.” ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನಿ  ಅಭಿಪ್ರಾಯಪಟ್ಟರು.

ತುಮಕೂರು ವಿವಿ ಗ್ರಂಥಾಲಯವು ಭಾರತ ಸರ್ಕಾರದ ಸಂಸ್ಕೃತಿ ಇಲಾಖೆಯ ರಾಜಾರಾಂ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ  ಏರ್ಪಡಿಸಿದ್ದ “ಗ್ರಂಥಾಲಯಗಳಲ್ಲಿ ನಾವೀನ್ಯಪೂರ್ಣ ಪದ್ಧತಿಗಳು” ಎಂಬ ವಿಷಯದ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಅವರು ಉದ್ಘಾಟಿಸಿದರು.

ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡಿದ ಕುವೆಂಪು ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಎಸ್. ಬಿರಾದಾರ್, “ತಂತ್ರಜ್ಞಾನದ ಪರಿಣಾಮವಾಗಿ ಗ್ರಂಥಾಲಯಗಳು ಇಂದು ಕೇವಲ ಪುಸ್ತಕಗಳ ಸಂಗ್ರಹಗಾರವಾಗಿ ಉಳಿದಿಲ್ಲ.  ಅನೇಕ ನಾವೀನ್ಯಪೂರ್ಣ ಪದ್ಧತಿಗಳನ್ನು ಅಳವಡಿಸಿಕೊಂಡು ಸೇವೆಗಳನ್ನು ಒದಗಿಸಲು ವಿಪುಲ ಅವಕಾಶಗಳಿವೆ.  ಗ್ರಂಥಾಲಯ ವೃತ್ತಿಪರರು ತಂತ್ರಜ್ಞಾನದ ಕೌಶಲ್ಯಗಳನ್ನು ಬೆಳೆಸಿಕೊಂಡು ನಾವೀನ್ಯಪೂರ್ಣ ಮಾಹಿತಿ ಸೇವೆಗಳನ್ನು ಒದಗಿಸಲು ಮುಂದಾಗಬೇಕು.  ತಂತ್ರಜ್ಞಾನವನ್ನು ಅಳವಡಿಕೊಳ್ಳಲು ಪ್ರಮುಖವಾಗಿ ಬೇಕಾಗಿರುವುದು ಧನಾತ್ಮಕ ಮನೋಭಾವ ಹಾಗೂ ಕಲಿಕೆಯ ಪ್ರವೃತ್ತಿ.” ಎಂದು ಹೇಳಿದರು.

ವಿವಿ ಕುಲಪತಿ ಪ್ರೊ. ರಾಜಾಸಾಬ್ ಮಾತನಾಡಿ “ಗ್ರಂಥಾಲಯ ವೃತ್ತಿಪರರು ಸ್ಥಾವರರಾಗದೆ, ಜಂಗಮರಾಗಬೇಕು.  ಗ್ರಂಥಾಲಯಗಳನ್ನು ಓದುಗರೆಡೆಗೆ ಕೊಂಡೊಯ್ಯಬೇಕು.  ಓದುಗರ ನಾಡಿ ಮಿಡಿತವನ್ನು ಅರಿತು ಅದಕ್ಕೆ ತಕ್ಕಂತೆ ಮಾಹಿತಿಯನ್ನು ಒದಗಿಸುವವನೇ ನಿಜವಾದ ಗ್ರಂಥಪಾಲಕ. ” ಎಂದರು.

ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ. ಡಿ. ವಿ ಪರಮಶಿವಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾಲೇಜು ಗ್ರಂಥಪಾಲಕರ ಸಂಘದ ಅಧ್ಯಕ್ಷ ಶ್ರೀ ಎಂ.ಎನ್.ಎನ್. ಪ್ರಸಾದ್ ಸಮ್ಮೇಳನದ ನಡಾವಳಿಗಳನ್ನು ಬಿಡುಗಡೆಗೊಳಿಸಿದರು.

ವಿವಿಧ ರಾಜ್ಯಗಳಿಂದ 200ಕ್ಕೂ ಹೆಚ್ಚು ಗ್ರಂಥಾಲಯ ವೃತ್ತಿಪರರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.  30ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆಯಾದವು.  ಸಮ್ಮೇಳನದ ನಿರ್ದೇಶಕ ವಿವಿ ಉಪಗ್ರಂಥಪಾಲಕ ಡಾ. ಬಿ. ರವಿವೆಂಕಟ್ ಹಾಗೂ ಸಂಘಟನಾ ಕಾರ್ಯದರ್ಶಿ ವಿವಿ ಗ್ರಂಥಾಲಯದ ಸಹಾಯಕ ಗ್ರಂಥಪಾಲಕ ಕುಮಾರ.ಬಿ. ಧನ್ಯವಾದ ಸಮರ್ಪಿಸಿದರು.